ಙ್ಞಾನೋಕ್ತಿಗಳು

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31


ಅಧ್ಯಾಯ 12

ಶಿಕ್ಷಣವನ್ನು ಪ್ರೀತಿಸುವವನು ತಿಳುವಳಿಕೆಯನ್ನು ಪ್ರೀತಿಸುವವನಾಗಿದ್ದಾನೆ; ಗದರಿಕೆ ಯನ್ನು ಹಗೆಮಾಡುವವನು ಪಶುಪ್ರಾಯನು.
2 ಒಳ್ಳೆ ಯವನು ಕರ್ತನ ದಯೆಯನ್ನು ಹೊಂದುತ್ತಾನೆ; ಕುಯುಕ್ತಿ ಮಾಡುವವನನ್ನು ಆತನು ದುಷ್ಟನೆಂದು ಖಂಡಿಸುತ್ತಾನೆ.
3 ಯಾವನೂ ದುಷ್ಟತನದಿಂದ ಸ್ಥಿರವಾಗುವದಿಲ್ಲ; ನೀತಿವಂತರ ಬೇರು ಕದಲುವದಿಲ್ಲ.
4 ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ನಾಚಿಕೆಪಡಿಸುವವಳು ಅವನ ಎಲುಬುಗಳಿಗೆ ಕೊಳೆ ಯುವಿಕೆಯಂತೆ ಇರುವಳು.
5 ನೀತಿವಂತರ ಆಲೋ ಚನೆಗಳು ನ್ಯಾಯವಾಗಿವೆ; ದುಷ್ಟರ ಆಲೋಚನೆಗಳು ಮೋಸ.
6 ದುಷ್ಟರ ಮಾತುಗಳು ರಕ್ತಕ್ಕಾಗಿ ಹೊಂಚು ಹಾಕುತ್ತವೆ; ಯಥಾರ್ಥವಂತರ ಬಾಯಿಯು ಅವರನ್ನು ಬಿಡಿಸುವದು.
7 ದುಷ್ಟರು ಕೆಡವಲ್ಪಟ್ಟು ಇಲ್ಲದೇ ಹೋಗುವರು; ನೀತಿವಂತರ ಮನೆಯು ನಿಲ್ಲುವದು.
8 ತನ್ನ ಜ್ಞಾನಕ್ಕನುಸಾರವಾಗಿ ಒಬ್ಬ ಮನುಷ್ಯನು ಹೊಗ ಳಲ್ಪಡುವನು; ವಕ್ರಹೃದಯವುಳ್ಳವನು ತಿರಸ್ಕರಿಸಲ್ಪಡು ವನು.
9 ರೊಟ್ಟಿಯ ಕೊರತೆ ಇದ್ದು ತನ್ನನ್ನು ತಾನೇ ಘನಪಡಿಸಿಕೊಳ್ಳುವವನಿಗಿಂತಲೂ ಸೇವಕನುಳ್ಳವನಾಗಿ ತಿರಸ್ಕರಿಸಲ್ಪಡುವವನೇ ಲೇಸು.
10 ನೀತಿವಂತನು ತನ್ನ ಪಶುವಿನ ಪ್ರಾಣವನ್ನು ರಕ್ಷಿಸುತ್ತಾನೆ. ಆದರೆ ದುಷ್ಟರ ಅಂತಃಕರುಣೆಯು ಕ್ರೂರತನವೇ.
11 ತನ್ನ ಹೊಲವನ್ನು ವ್ಯವಸಾಯ ಮಾಡುವವನು ರೊಟ್ಟಿಯಿಂದ ತೃಪ್ತಿ ಹೊಂದುವನು; ನಿಷ್ಪ್ರಯೋಜಕರನ್ನು ಹಿಂಬಾಲಿಸುವ ವನು ವಿವೇಕ ಶೂನ್ಯನು.
12 ದುಷ್ಟರು ಕೆಟ್ಟವರ ಬಲೆಯನ್ನು ಅಪೇಕ್ಷಿಸುತ್ತಾರೆ; ನೀತಿವಂತರ ಬೇರು ಫಲವನ್ನು ಕೊಡುತ್ತದೆ.
13 ತನ್ನ ತುಟಿಗಳ ದೋಷದಿಂದ ದುಷ್ಟನು ಉರ್ಲಿಗೆ ಬೀಳುವನು; ನೀತಿವಂತರು ಇಕ್ಕಟ್ಟಿ ನೊಳಗಿಂದ ತಪ್ಪಿಸಿಕೊಳ್ಳುವರು.
14 ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದ ರಿಂದ ತೃಪ್ತನಾಗುವನು; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.
15 ಅವಿವೇಕಿಯ ಮಾರ್ಗ ವು ತನ್ನ ಕಣ್ಣುಗಳಿಗೆ ನೆಟ್ಟಗಾಗಿದೆ; ಆಲೋಚನೆಗೆ ಕಿವಿಗೊಡುವವನು ಜ್ಞಾನಿಯಾಗಿದ್ದಾನೆ.
16 ಅವಿವೇ ಕಿಯ ಕೋಪವು ತಟ್ಟನೆ ರಟ್ಟಾಗುವದು; ಜಾಣನು ಅವಮಾನವನ್ನು ಮರೆಮಾಡುತ್ತಾನೆ.
17 ಸತ್ಯವನ್ನಾ ಡುವವನು ನ್ಯಾಯವನ್ನೂ ಸುಳ್ಳುಸಾಕ್ಷಿಯು ಮೋಸ ವನ್ನೂ ತೋರ್ಪಡಿಸುತ್ತಾನೆ.
18 ಕತ್ತಿಯ ಇರಿತದ ಹಾಗೆ ಮಾತನಾಡುವದು ಉಂಟು. ಜ್ಞಾನವಂತರ ನಾಲಿಗೆಯು ಆರೋಗ್ಯ.
19 ಸತ್ಯದ ತುಟಿಯು ಸದಾ ಸ್ಥಿರಗೊಳ್ಳು ವದು; ಸುಳ್ಳಾಡುವ ನಾಲಿಗೆಯು ಕ್ಷಣಿಕ.
20 ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ.
21 ನೀತಿವಂತನಿಗೆ ಯಾವ ಕೇಡೂ ಸಂಭವಿಸದು; ದುಷ್ಟರಾದರೋ ಕೇಡಿನಿಂದ ತುಂಬಿಕೊಳ್ಳುವರು.
22 ಸುಳ್ಳಾ ಡುವ ತುಟಿಗಳು ಕರ್ತನಿಗೆ ಅಸಹ್ಯವಾಗಿವೆ. ಸತ್ಯದಿಂದ ನಡೆದುಕೊಳ್ಳುವವರು ಆತನ ಆನಂದವಾಗಿದ್ದಾರೆ.
23 ಜಾಣನು ತಿಳಿದದ್ದನ್ನು ಗುಪ್ತಪಡಿಸುತ್ತಾನೆ. ಅವಿವೇಕಿ ಗಳ ಹೃದಯವು ಅವಿವೇಕತ್ವವನ್ನು ಪ್ರಕಟಿಸುತ್ತದೆ.
24 ಚುರುಕು ಕೈಯುಳ್ಳವನು ಆಳುವನು, ಸೋಮಾರಿ ಗಳು ಕಪ್ಪಕೊಡುವವರಾಗುವರು.
25 ಮನುಷ್ಯನ ಹೃದ ಯದಲ್ಲಿರುವ ಭಾರವು ಅದನ್ನು ಕುಗ್ಗಿಸುವದು; ಒಳ್ಳೆಯ ಮಾತು ಅದನ್ನು ಹಿಗ್ಗುವಂತೆ ಮಾಡುವದು.
26 ನೀತಿ ವಂತನು ತನ್ನ ನೆರೆಯವನಿಗಿಂತ ಶ್ರೇಷ್ಠನಾಗಿದ್ದಾನೆ; ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆ ಯುತ್ತದೆ.
27 ಸೋಮಾರಿಯು ಬೇಟೆಯಾಡಿದ್ದನ್ನು ಬೇಯಿಸುವದಿಲ್ಲ; ಆದರೆ ಶ್ರದ್ಧೆಯುಳ್ಳವನ ಆಸ್ತಿಯು ಅಮೂಲ್ಯವಾಗಿದೆ.
28 ನೀತಿಯ ಮಾರ್ಗದಲ್ಲಿ ಜೀವ ವಿದೆ; ಅದರ ದಾರಿಯಲ್ಲಿ ಮರಣವೇ ಇಲ್ಲ.