ಚೆಫನ್ಯ

1 2 3


ಅಧ್ಯಾಯ 2

ಅಪೇಕ್ಷಿಸಲ್ಪಡದ ಓ ಜನಾಂಗವೇ ನೀವು ಒಟ್ಟಾಗಿ ಕೂಡಿಕೊಳ್ಳಿರಿ, ಹೌದು, ಒಟ್ಟಾಗಿ ಕೂಡಿಕೊಳ್ಳಿರಿ.
2 ನಿರ್ಣಯವು ಬರುವದಕ್ಕಿಂತ ಮುಂಚೆ ಯೂ ದಿನವು ಹೊಟ್ಟಿನಂತೆ ಹಾದುಹೋಗುವದಕ್ಕಿಂತ ಮುಂಚೆಯೂ ಕರ್ತನ ಕೋಪದ ದಿನವು ಉರಿದು ನಿಮ್ಮ ಮೇಲೆ ಬರುವದಕ್ಕಿಂತ ಮುಂಚೆಯೂ ಕೂಡಿ ಕೊಳ್ಳಿರಿ.
3 ಆತನ ನ್ಯಾಯತೀರ್ಪುಗಳನ್ನು ಮಾಡುವ ಲೋಕದ ದೀನರೆಲ್ಲರೇ, ಕರ್ತನನ್ನು ಹುಡುಕಿರಿ, ನೀತಿ ಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ; ಒಂದು ವೇಳೆ ಕರ್ತನ ಕೋಪದ ದಿನದಲ್ಲಿ ಮರೆಯಾಗುವಿರಿ.
4 ಗಾಜವು ಕೈಬಿಡಲ್ಪಡುವದು, ಅಷ್ಕೆಲೋನ್‌ ಹಾಳಾ ಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಹೊರಡಿಸು ವರು, ಎಕ್ರೋನ್‌ ಕೀಳಲ್ಪಡುವದು.
5 ಸಮುದ್ರತೀರದ ನಿವಾಸಿಗಳಾದ ಕೆರೇತ್ಯರ ಜನಾಂಗಕ್ಕೆ ಅಯ್ಯೋ! ಕರ್ತನ ವಾಕ್ಯವು ನಿಮಗೆ ವಿರೋಧವಾಗಿದೆ; ಓ ಕಾನಾನೇ, ಫಿಲಿಷ್ಟಿಯರ ದೇಶವೇ, ನಿವಾಸಿಯೇ ಇಲ್ಲದ ಹಾಗೆ ನಿನ್ನನ್ನು ನಾಶಮಾಡುವೆನು.
6 ಸಮುದ್ರದ ತೀರವು ಕುರುಬರು ಮೇಯಿಸುವ ಸ್ಥಳಗಳಾಗಿಯೂ ಕುಂಟೆ ಗಳಾಗಿಯೂ ಕುರೀಹಟ್ಟಿಗಳಾಗಿಯೂ ಇರುವದು.
7 ತೀರವು ಯೆಹೂದದ ಮನೆತನದವರ ಉಳಿದವರಿಗೆ ಆಗುವದು; ಅದರ ಮೇಲೆ ಮೇಯಿಸುವರು; ಅಷ್ಕೆ ಲೋನಿನ ಮನೆತನಗಳಲ್ಲಿ ಸಾಯಂಕಾಲ ಅವರು ಮಲಗಿಕೊಳ್ಳುವರು; ಅವರ ದೇವರಾದ ಕರ್ತನು ಅವರನ್ನು ದರ್ಶಿಸಿ ಅವರ ಸೆರೆಯನ್ನು ತಿರುಗಿಸುವನು.
8 ನನ್ನ ಜನರನ್ನು ನಿಂದಿಸಿ, ಅವರ ಮೇರೆಗೆ ಮೋವಾ ಬ್ಯರೂ ಅಮ್ಮೋನ್ಯರೂ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಂಡದ್ದನ್ನು ನಾನು ಕೇಳಿದ್ದೇನೆ.
9 ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳು ವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಮೋವಾಬು ಸೊದೋಮಿನ ಹಾಗಾಗುವದು; ಅಮ್ಮೋ ನನ ಮಕ್ಕಳು ಗೊಮೋರದ ಹಾಗಾಗುವರು; ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಣಿಗಳುಳ್ಳಂಥ ನಿತ್ಯವಾಗಿ ಹಾಳಾಗುವಂಥ ಸ್ಥಳವಾಗುವರು; ನನ್ನ ಜನರಲ್ಲಿ ಉಳಿದವರು ಅವರನ್ನು ಸುಲುಕೊಳ್ಳುವರು; ನನ್ನ ಜನರಲ್ಲಿ ಮಿಕ್ಕಾದವರು ಅವರನ್ನು ಸ್ವಾಧೀನ ಮಾಡಿಕೊಳ್ಳುವರು.
10 ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವದು; ಅವರು ಸೈನ್ಯಗಳ ಕರ್ತನ ಜನರಿಗೆ ವಿರೋಧವಾಗಿ ನಿಂದಿಸಿ ತಮ್ಮನ್ನು ಹೆಚ್ಚಿಸಿಕೊಂಡ ದ್ದರಿಂದಲೇ
11 ಕರ್ತನು ಅವರಿಗೆ ಭಯಂಕರನಾಗಿ ರುವನು. ಆತನು ಭೂಮಿಯ ಎಲ್ಲಾ ದೇವರುಗಳನ್ನು ಕ್ಷೀಣಮಾಡುವನು; ಅನ್ಯಜನಾಂಗಗಳ ದ್ವೀಪಗಳವ ರೆಲ್ಲರು ತಮ್ಮ ತಮ್ಮ ಸ್ಥಳಗಳಿಂದ ಆತನನ್ನು ಆರಾ ಧಿಸುವರು.
12 ಕೂಷ್ಯರೇ, ನೀವೂ ಸಹ ನನ್ನ ಕತ್ತಿ ಯಿಂದ ಕೊಲ್ಲಲ್ಪಡುವಿರಿ;
13 ಆತನು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ ಅಶ್ಶೂರನ್ನು ನಾಶಮಾಡಿ ನಿನೆವೆಯನ್ನು ಹಾಳಾಗಿಯೂ ಅರಣ್ಯದಂತೆ ಒಣಗಿ ದ್ದಾಗಿಯೂ ಮಾಡುವನು.
14 ಅದರ ಮಧ್ಯದಲ್ಲಿ ಮಂದೆಗಳೂ ಜನಾಂಗಗಳ ಮೃಗಗಳೆಲ್ಲವೂ ಮಲಗುವವು; ಬಕಪಕ್ಷಿಯೂ ಮುಳ್ಳು ಹಂದಿಯೂ ಅದರ ಮೇಲಿನ ಅವುಗಳ ಹಾಸುಗಳಲ್ಲಿ ಇಳುಕೊಳ್ಳುವವು; ಕಿಟಕಿಗಳಲ್ಲಿ ಹಾಡುವ ಶಬ್ದವಿರುವದು; ಹೊಸ್ತಿಲಗಳಲ್ಲಿ ಹಾಳು ಇರುವದು; ದೇವದಾ ರಿನ ಕೆಲಸವನ್ನು ಬೈಲುಮಾಡುವನು.
15 ನಿಶ್ಚಿಂತೆಯಾಗಿ ವಾಸಿಸಿದಂಥ ತಾನೇ ಹೊರತು ಮತ್ತೊಂದಿಲ್ಲವೆಂದು ತನ್ನೊಳಗೆ ಅಂದುಕೊಂಡಂಥ ಉಲ್ಲಾಸದ ಪಟ್ಟಣವು ಇದೇ. ಅದು ಎಷ್ಟೋ ಹಾಳಾಯಿತು; ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. ಅದನ್ನು ಹಾದು ಹೋಗುವವರೆಲ್ಲರು ಸಿಳ್ಳಿಟ್ಟು ಕೈ ಅಲ್ಲಾಡಿಸುವರು.