ಸಂತೋಷ


 • ಆದರೆ ನಿನ್ನಲ್ಲಿ ಭರವಸವಿಟ್ಟವರೆಲ್ಲರು ಸಂತೋಷಿ ಸಲಿ, ನೀನು ಅವರನ್ನು ಕಾಯುವದರಿಂದ ಯುಗ ಯುಗಕ್ಕೂ ಹರ್ಷಿಸಲಿ; ನಿನ್ನ ನಾಮವನ್ನು ಪ್ರೀತಿ ಮಾಡುವವರು ನಿನ್ನಲ್ಲಿ ಉತ್ಸಾಹಪಡಲಿ.
  ಕೀರ್ತನೆಗಳು 5:11
 • ಜೀವದ ಮಾರ್ಗವನ್ನು ನನಗೆ ತಿಳಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ.
  ಕೀರ್ತನೆಗಳು 16:11
 • ಆತನ ಕೋಪವು ಕ್ಷಣಮಾತ್ರ. ಆತನ ಕಟಾಕ್ಷವು ಜೀವವೇ; ರಾತ್ರಿಯಲ್ಲಿ ದುಃಖವು ತಂಗಬಹುದಾದರೂ ಬೆಳಿಗ್ಗೆ ಆನಂದವು ಬರುವದು.
  ಕೀರ್ತನೆಗಳು 30:5
 • ಕಣ್ಣೀರಿ ನಿಂದ ಬಿತ್ತುವವರು ಉತ್ಸಾಹದಲ್ಲಿ ಕೊಯ್ಯುವರು. ಅಮೂಲ್ಯವಾದ ಬೀಜವನ್ನು ಹೊತ್ತುಕೊಂಡು ಅಳುತ್ತಾ ಹೋಗುವವನು
  ಕೀರ್ತನೆಗಳು 126:5
 • ಕರ್ತನಿಗೆ ಭಯಪಟ್ಟು ಆತನ ಮಾರ್ಗಗಳಲ್ಲಿ ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು. ಹೀಗಾದರೆ ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ ಸಂತೋಷ ವುಳ್ಳವನಾಗಿರುವಿ, ನಿನಗೆ ಒಳ್ಳೇಯದಾಗುವದು.
  ಕೀರ್ತನೆಗಳು 128:1, 2
 • ಕರ್ತನಿಂದ ವಿಮೋಚಿಸಲ್ಪಟ್ಟವರು ಹಿಂತಿರುಗಿಕೊಂಡು ತಮ್ಮ ತಲೆಗಳ ಮೇಲೆ ಉತ್ಸಾಹಧ್ವನಿ ನಿತ್ಯವಾದ ಸಂತೋಷಗಳೊಂದಿಗೆ ಚೀಯೋನಿಗೆ ಬರು ವರು; ಅವರು ಹರ್ಷಾನಂದಗಳನ್ನು ಅನುಭವಿಸು ವರು. ದುಃಖವೂ, ನಿಟ್ಟುಸಿರೂ ಓಡಿಹೋಗುವವು.
  ಯೆಶಾಯ 35:10
 • ನನ್ನ ಆನಂದವು ನಿಮ್ಮಲ್ಲಿರುವ ಹಾಗೆಯೂ ನಿಮ್ಮ ಆನಂದವು ಸಂಪೂರ್ಣವಾಗುವ ಹಾಗೆಯೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ.
  ಯೋಹಾನನು 15:11
 • ಯಾಕಂದರೆ ತಿನ್ನುವದೂ ಕುಡಿಯುವದೂ ದೇವರ ರಾಜ್ಯವಲ್ಲ; ಆದರೆ ನೀತಿಯೂ ಸಮಾಧಾನವೂ ಪವಿತ್ರಾತ್ಮನಲ್ಲಿರುವ ಆನಂದವೂ ಆಗಿದೆ.
  ರೋಮಾಪುರದವರಿಗೆ 14:17