ವಿಶ್ವದ ವಿಕಾಸ ವಿರುದ್ಧ ಸೃಷ್ಟಿ


 • ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.
  ಆದಿಕಾಂಡ 1:1
 • ದೇವರು--ಚಲಿಸುವ ಜೀವಜಂತುಗಳನ್ನು ನೀರು ಗಳು ಸಮೃದ್ಧಿಯಾಗಿ ಬರಮಾಡಲಿ; ಭೂಮಿಯ ಮೇಲೆ ಆಕಾಶದ ವಿಶಾಲದಲ್ಲಿ ಪಕ್ಷಿಗಳು ಹಾರಾಡಲಿ ಅಂದನು.
  ಆದಿಕಾಂಡ 1:20
 • ಇದಲ್ಲದೆ ತಮ್ಮ ಜಾತಿಯ ಪ್ರಕಾರ ನೀರುಗಳು ಸಮೃದ್ಧಿಯಾಗಿ ಬರಮಾಡಿದ ದೊಡ್ಡ ತಿಮಿಂಗಿಲಗಳನ್ನೂ ಚಲಿಸುವ ಪ್ರತಿಯೊಂದು ಜೀವ ಜಂತುಗಳನ್ನೂ ತನ್ನ ಜಾತಿಗನುಸಾರವಾದ ರೆಕ್ಕೆಗಳಿದ್ದ ಪ್ರತಿಯೊಂದು ಪಕ್ಷಿಯನ್ನೂ ದೇವರು ಸೃಷ್ಟಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
  ಆದಿಕಾಂಡ 1:21
 • ದೇವರು--ಆಯಾ ಜಾತಿಯ ಜೀವಜಂತುಗಳನ್ನೂ ಪಶುಗಳನ್ನೂ ಹರಿದಾಡುವ ಕ್ರಿಮಿಗಳನ್ನೂ ತನ್ನ ಜಾತಿಗನುಸಾರವಾದ ಭೂಮೃಗಗಳನ್ನೂ ಭೂಮಿಯು ಬರಮಾಡಲಿ ಅಂದನು; ಅದು ಹಾಗೆಯೇ ಆಯಿತು.
  ಆದಿಕಾಂಡ 1:24
 • ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು.
  ಆದಿಕಾಂಡ 1:26
 • ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು, ದೇವರರೂಪದಲ್ಲಿ ಆತನು ಅವನನ್ನು ಸೃಷ್ಟಿಸಿದನು. ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು.
  ಆದಿಕಾಂಡ 1:27
 • ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು; ಆಗ ಮನುಷ್ಯನು ಜೀವಾತ್ಮ ನಾದನು.
  ಆದಿಕಾಂಡ 2:7
 • ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್‌ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.
  ವಿಮೋಚನಕಾಂಡ 20:11
 • ಆದರೂ ಪಶುಗಳನ್ನು ಕೇಳು. ಅವು ನಿನಗೆ ಬೋಧಿ ಸುವವು; ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುವವು. ಅಥವಾ ಭೂಮಿಯ ಸಂಗಡ ಮಾತ ನಾಡು; ಅದು ನಿನಗೆ ಬೋಧಿಸುವದು; ಸಮುದ್ರದ ವಿಾನುಗಳು ನಿನಗೆ ವಿವರಿಸುವವು. ಕರ್ತನ ಕೈ ಇದನ್ನು ಮಾಡಿತೆಂದು ಇವೆಲ್ಲವುಗಳಲ್ಲಿ ತಿಳಿಯದಿರು ವದು ಯಾವದು?
  ಯೋಬನು 12:7-9
 • ದೇವರು ಆಶ್ಚರ್ಯವಾಗಿ ತನ್ನ ಶಬ್ದದಿಂದ ಗುಡುಗುತ್ತಾನೆ; ನಾವು ಗ್ರಹಿಸದ ಮಹತ್ತುಗಳನ್ನು ಆತನು ಮಾಡುತ್ತಾನೆ.
  ಯೋಬನು 37:5
 • ನಾನು ನಿನ್ನ ಕೂಡ ನಿರ್ಮಿಸಿದ ನೀರಾನೆಯನ್ನು ನೋಡು; ಅದು ಎತ್ತಿನ ಹಾಗೆ ಹುಲ್ಲನ್ನು ಮೇಯುತ್ತದೆ. ಇಗೋ, ಅದರ ಸೊಂಟದಲ್ಲಿರುವ ಅದರ ಶಕ್ತಿ ಯನ್ನೂ ಅದರ ಹೊಟ್ಟೆಯ ನರಗಳಲ್ಲಿರುವ ಅದರ ತ್ರಾಣವನ್ನೂ ನೋಡು. ತನ್ನ ಬಾಲವನ್ನು ದೇವ ದಾರಿನ ಹಾಗೆ ಬೊಗ್ಗಿಸುತ್ತದೆ; ಅದರ ಸೊಂಟದ ನರಗಳು ಸುತ್ತಿ ಹೆಣೆದು ಕೊಂಡಿವೆ. ಅದರ ಎಲುಬುಗಳು ಹಿತ್ತಾಳೆಯ ಸಲಿಕೆಗಳಂತೆ ಬಲವಾಗಿವೆ; ಅಸ್ತಿವಾರಗಳು ಕಬ್ಬಿಣದ ಕಂಬಿಗಳ ಹಾಗೆ ಅವೆ.
  ಯೋಬನು 40:15-18
 • ಉತ್ತರವನ್ನೂ ದಕ್ಷಿಣವನ್ನೂ ನೀನೇ ನಿರ್ಮಿಸಿದ್ದೀ; ತಾಬೋರೂ ಹೆರ್ಮೋನೂ ನಿನ್ನ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ.
  ಕೀರ್ತನೆಗಳು 89:12
 • ಬೆಟ್ಟಗಳು ಹುಟ್ಟುವದಕ್ಕಿಂತ ಮುಂಚೆಯೂ ನೀನು ಭೂಮಿಯನ್ನೂ ಲೋಕವನ್ನೂ ನಿರ್ಮಿಸುವದಕ್ಕಿಂತ ಮುಂಚೆಯೂ ನಿತ್ಯತ್ವದಿಂದ ನಿತ್ಯತ್ವಕ್ಕೂ ನೀನು ದೇವರಾಗಿದ್ದೀ.
  ಕೀರ್ತನೆಗಳು 90:2
 • ನೀನು ನಿನ್ನ ಶ್ವಾಸ ವನ್ನು ಕಳುಹಿಸಲು ಅವು ನಿರ್ಮಿಸಲ್ಪಡುತ್ತವೆ; ನೀನು ಭೂಮಿಯ ಮುಖವನ್ನು ಹೊಸದಾಗಿ ಮಾಡುತ್ತೀ.
  ಕೀರ್ತನೆಗಳು 104:30
 • ಕರ್ತನ ಹೆಸರನ್ನು ಅವು ಸ್ತುತಿಸಲಿ; ಆತನು ಆಜ್ಞಾ ಪಿಸಲು ಅವು ನಿರ್ಮಿಸಲ್ಪಟ್ಟವು.
  ಕೀರ್ತನೆಗಳು 148:5
 • ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನು ಅದರಿಂದ ಉತ್ಪತ್ತಿ ಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ ಸಂಚರಿಸುವವರಿಗೆ ಆತ್ಮವನ್ನು ಕೊಡು ತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ-
  ಯೆಶಾಯ 42:5
 • ನಾನು ಬೆಳಕನ್ನು ರೂಪಿಸುವವನೂ ಕತ್ತಲನ್ನು ನಿರ್ಮಿಸುವವನೂ ಸಮಾಧಾನವನ್ನು ಮಾಡು ವವನೂ ಕೆಟ್ಟದ್ದನ್ನು ನಿರ್ಮಿಸುವವನೂ ನಾನೇ; ಕರ್ತ ನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.
  ಯೆಶಾಯ 45:7
 • ನಾನು ಭೂಮಿಯನ್ನು ಉಂಟುಮಾಡಿ, ಅದರ ಮೇಲೆ ಮನು ಷ್ಯನನ್ನು ಸೃಷ್ಟಿಸಿದೆನು; ನನ್ನ ಕೈಗಳೇ ಆಕಾಶಗಳನ್ನು ವಿಸ್ತರಿಸಿದವು ಮತ್ತು ನಾನು ಅದರ ಸೈನ್ಯಕ್ಕೆಲ್ಲಾ ಅಪ್ಪಣೆ ಕೊಟ್ಟೆನು.
  ಯೆಶಾಯ 45:12
 • ಆಕಾಶಗಳನ್ನು ನಿರ್ಮಿಸಿದ ಕರ್ತನು ಇಂತೆನ್ನು ತ್ತಾನೆ--ದೇವರು ತಾನೇ ಭೂಮಿಯನ್ನು ನಿರ್ಮಿಸಿ ಅದನ್ನು ಉಂಟು ಮಾಡಿದನು. ಆತನೇ ಅದನ್ನು ಸ್ಥಾಪಿಸಿದನು; ಅದನ್ನು ವ್ಯರ್ಥವಾಗಿ ಸೃಷ್ಟಿಸದೇ ಜನ ನಿವಾಸಕ್ಕಾಗಿಯೇ ರೂಪಿಸಿದನು; ನಾನೇ ಕರ್ತನು, ಮತ್ತೊಬ್ಬನಿಲ್ಲ.
  ಯೆಶಾಯ 45:18
 • ಇಗೋ, ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಟಿಸುತ್ತೇನೆ. ಮುಂಚಿನವುಗಳು ಜ್ಞಾಪಕದಲ್ಲಿರುವದಿಲ್ಲ ಇಲ್ಲವೆ ಅದರ ಸ್ಮರಣೆಗೆ ಬರುವ ದಿಲ್ಲ.
  ಯೆಶಾಯ 65:17
 • ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬನೇ ದೇವರು ಸೃಷ್ಟಿಸಿದನಲ್ಲವೋ? ಯಾಕೆ ಪ್ರತಿ ಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಿಂದ ನಡೆದು ನಮ್ಮ ತಂದೆಗಳ ಒಡಂಬಡಿಕೆ ಯನ್ನು ಅಪವಿತ್ರ ಮಾಡುತ್ತೇವೆ?
  ಮಲಾಕಿಯ 2:10
 • ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು ಅವರನ್ನು ಗಂಡು ಹೆಣ್ಣಾಗಿ ಮಾಡಿದನು.
  ಮಾರ್ಕನು 10:6
 • ಯಾಕಂದರೆ ಆ ದಿವಸಗಳಲ್ಲಿ ಸಂಕಟವಿರುವದು; ಅಂಥದ್ದು ದೇವರು ಸೃಷ್ಟಿಸಿದ ಸೃಷ್ಟಿ ಮೊದಲುಗೊಂಡು ಈ ಸಮಯದವರೆಗೂ ಆಗಲಿಲ್ಲ ಇಲ್ಲವೆ ಆಗುವದೂ ಇಲ್ಲ.
  ಮಾರ್ಕನು 13:19
 • ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ್ಲ.
  ಯೋಹಾನನು 1:3
 • ಹೇಗೆಂದರೆ ಜಗದು ತ್ಪತ್ತಿಗೆ ಮೊದಲುಗೊಂಡು ಆತನ ಅದೃಶ್ಯವಾದವುಗಳು ಅಂದರೆ ಆತನ ನಿತ್ಯ ಶಕ್ತಿಯೂ ದೈವತ್ವವೂ ಸೃಷ್ಟಿಗಳನ್ನು ಗ್ರಹಿಸುವದರ ಮೂಲಕ ಸ್ಪಷ್ಟವಾಗಿ ಕಾಣಬರುತ್ತವೆ.ಆದಕಾರಣ ಅವರು ನೆವವಿಲ್ಲದವರಾಗಿದ್ದಾರೆ. ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು. ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು; ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು. ಆದಕಾರಣ ತಮ್ಮ ಹೃದಯಗಳ ದುರಾಶೆಗಳ ಮೂಲಕ ತಮ್ಮ ಸ್ವಂತ ದೇಹಗಳನ್ನು ತಮ್ಮೊಳಗೆ ಅವ ಮಾನಪಡಿಸಿಕೊಳ್ಳುವಂತೆ ದೇವರು ಅವರನ್ನು ಅಶುದ್ಧ ತನಕ್ಕೆ ಒಪ್ಪಿಸಿದನು; ಅವರು ದೇವರ ವಿಷಯವಾದ ಸತ್ಯವನ್ನು ಸುಳ್ಳಿಗೆ ಬದಲಾಯಿಸಿ ಸೃಷ್ಟಿಕರ್ತನಿಗಿಂತ ಹೆಚ್ಚಾಗಿ ಸೃಷ್ಟಿಯನ್ನೇ ಆರಾಧಿಸಿ ಸೇವಿಸಿದರು; ಆತನು (ಸೃಷ್ಟಿಕರ್ತನು) ಎಂದೆಂದಿಗೂ ಸ್ತುತಿ ಹೊಂದತಕ್ಕವನು. ಆಮೆನ್‌.
  ರೋಮಾಪುರದವರಿಗೆ 1:20-25
 • ದೇವಪುತ್ರರ ಪ್ರತ್ಯಕ್ಷತೆಯನ್ನು ಸೃಷ್ಟಿಯು ಲವಲವಿಕೆಯಿಂದ ಎದುರು ನೋಡುತ್ತಾ ಇದೆ. ಸೃಷ್ಟಿಯು ವ್ಯರ್ಥತ್ವಕ್ಕೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದಾತನ ಮುಖಾಂ ತರ ನಿರೀಕ್ಷೆಯಲ್ಲಿಯೇ. ಸೃಷ್ಟಿಯು ತಾನೇ ದೇವರ ಮಕ್ಕಳ ಮಹಿಮೆಯ ಸ್ವಾತಂತ್ರ್ಯತೆಯಲ್ಲಿ ಸೇರುವಂತೆ ನಾಶನದ ದಾಸತ್ವದಿಂದ ಬಿಡುಗಡೆ ಹೊಂದುವದು. ಹಿಗೆ ಸರ್ವಸೃಷ್ಟಿಯು ಇಂದಿನ ವರೆಗೂ ನರಳುತ್ತಾ ಪ್ರಸವವೇದನೆ ಪಡುತ್ತದೆಯೆಂದು ನಾವು ಬಲ್ಲೆವು.
  ರೋಮಾಪುರದವರಿಗೆ 8:19-22
 • ಇದಲ್ಲದೆ ಪುರುಷನು ಸ್ತ್ರೀಯ ನಿಮಿತ್ತವಾಗಿ ನಿರ್ಮಾಣವಾಗಲಿಲ್ಲ; ಆದರೆ ಸ್ತ್ರೀಯು ಪುರುಷನ ನಿಮಿತ್ತವಾಗಿ ನಿರ್ಮಾಣವಾದಳು.
  1 ಕೊರಿಂಥದವರಿಗೆ 11:9
 • ದೇವರು ಮುಂದಾಗಿ ನೇಮಿಸಿದ ಸತ್ಕ್ರಿಯೆ ಗಳಲ್ಲಿ ನಾವು ನಡೆಯುವಂತೆ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟವರಾದ ನಾವು ಆತನ ಕೆಲಸವಾಗಿದ್ದೇವೆ.
  ಎಫೆಸದವರಿಗೆ 2:10
 • ಭೂಪರಲೋಕ ಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನ ಗಳಾಗಲಿ ಇಲ್ಲವೆ ಪ್ರಭುತ್ವಗಳಾಗಲಿ ಇಲ್ಲವೆ ದೊರೆ ತನಗಳಾಗಲಿ ಇಲ್ಲವೆ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನಿಂದಲೂ ಆತನಿ ಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು.
  ಕೊಲೊಸ್ಸೆಯವರಿಗೆ 1:16
 • ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನ ಬೋಧನೆ ಯಿಂದ ನಿಮ್ಮನ್ನು ಕೆಡಿಸಿಬಿಟ್ಟಾರು, ಎಚ್ಚರಿಕೆಯಾಗಿರ್ರಿ.
  ಕೊಲೊಸ್ಸೆಯವರಿಗೆ 2:8
 • ನೀವು ನೂತನ ಮನುಷ್ಯನನ್ನು ಧರಿಸಿಕೊಂಡವರಾಗಿದ್ದೀರಿ ಅವನನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ಜ್ಞಾನದಲ್ಲಿ ಅವನು ನೂತನವಾಗುತ್ತಾನೆ.
  ಕೊಲೊಸ್ಸೆಯವರಿಗೆ 3:10
 • ಮದುವೆಯಾಗಬಾರದೆಂತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವದಕ್ಕೋಸ್ಕರ ದೇವರು ಉಂಟು ಮಾಡಿದ ಆಹಾರವನ್ನು ತಿನ್ನಬಾರ ದೆಂತಲೂ ಆಜ್ಞಾಪಿಸುತ್ತಾರೆ.
  1 ತಿಮೊಥೆಯನಿಗೆ 4:3
 • ಕರ್ತನೇ, ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ, ಆಕಾಶಗಳು ನಿನ್ನ ಕೈಕೆಲಸಗಳಾಗಿವೆ.
  ಇಬ್ರಿಯರಿಗೆ 1:10
 • ನಂಬಿಕೆಯು ನಿರೀಕ್ಷಿಸುವವುಗಳ ನಿಜ ಲಕ್ಷಣವೂ ಕಾಣದವುಗಳ ನಿದರ್ಶನವೂ ಆಗಿದೆ. ಹಿರಿಯರು ನಂಬಿಕೆಯಿಂದಲೇ ಒಳ್ಳೇ ಸಾಕ್ಷಿ ಹೊಂದಿದರು. ನಂಬಿಕೆಯಿಂದಲೇ ಲೋಕಗಳು ದೇವರ ಮಾತಿನಿಂದ ನಿರ್ಮಿತವಾದವೆಂದು ನಾವು ತಿಳುಕೊಂಡದ್ದರಿಂದ ಕಾಣಿಸುವವುಗಳು ದೃಶ್ಯ ವಸ್ತು ಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ.
  ಇಬ್ರಿಯರಿಗೆ 11:1-3
 • ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು-- ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆ ಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳ ಬೇಕು. ಅವರು ಇದನ್ನು ಬೇಕೆಂದು ತಿಳಿಯಲಾರರು; ಅದೇನಂದರೆ ಪೂರ್ವದಲ್ಲಿದ್ದ ಆಕಾಶಗಳೂ ನೀರಿನ ಹೊರಗೆ ಮತ್ತು ನೀರಿನ ಒಳಗೆ ನಿಂತಿರುವ ಭೂಮಿಯೂ ದೇವರ ವಾಕ್ಯದಿಂದ ಉಂಟಾಗಿ ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಳಯದಲ್ಲಿ ನಾಶ ವಾಯಿತು.
  2 ಪೇತ್ರನು 3:3-6
 • ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ: ಆಮೆನ್‌ ಎಂಬಾತನು ಮತ್ತು ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಯ ಆದಿಯೂ ಆಗಿರುವಾತನು ಹೇಳುವವುಗಳು ಯಾವವೆಂದರೆ,
  ಪ್ರಕಟನೆ 3:14
 • ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು.
  ಪ್ರಕಟನೆ 4:11
 • ಪರಲೋಕವನ್ನೂ ಅದರಲ್ಲಿರುವವುಗಳನ್ನೂ ಭೂಮಿಯನ್ನೂ ಅದರಲ್ಲಿರುವವುಗಳನ್ನೂ ಸಮುದ್ರ ವನ್ನೂ ಅದರಲ್ಲಿರುವವುಗಳನ್ನೂ ಸೃಷ್ಟಿಸಿ ಯುಗ ಯುಗಾಂತರಗಳಲ್ಲಿ ಜೀವಿಸುವಾತನ ಮೇಲೆ ಆಣೆ ಯಿಟ್ಟು ಇನ್ನು ಸಮಯವಿರುವದಿಲ್ಲ ಎಂತಲೂ
  ಪ್ರಕಟನೆ 10:6
 • ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜನಾಂಗ ಕ್ಕೂ ಕುಲದವರಿಗೂ ಭಾಷೆಯವರಿಗೂ ಮತ್ತು ಜನ ರಿಗೂ ಸಾರುವದಕ್ಕೆ ನಿತ್ಯವಾದ ಸುವಾರ್ತೆ ಇದ್ದ ಇನ್ನೊಬ್ಬ ದೂತನು ಆಕಾಶದ ಮಧ್ಯದಲ್ಲಿ ಹಾರುವದನ್ನು ನಾನು ಕಂಡೆನು. ಅವನು--ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ; ಯಾಕಂದರೆ ಆತನು ನ್ಯಾಯತೀರ್ಪು ಮಾಡುವ ಗಳಿಗೆ ಬಂದದೆ; ಪರಲೋಕವನ್ನೂ ಭೂ ಲೋಕವನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟು ಮಾಡಿದಾತನನ್ನೇ ಆರಾಧಿಸಿರಿ ಎಂದು ಮಹಾ ಶಬ್ದದಿಂದ ಹೇಳಿದನು.
  ಪ್ರಕಟನೆ 14:6-7