ಗರ್ಭಧಾರಣೆ ಮತ್ತು ಹೆರಿಗೆ


 • ಅಂದರೆ ನಿನಗೆ ಸಹಾಯಮಾಡುವ ನಿನ್ನ ತಂದೆಯ ದೇವರಿಂದ, ಮೇಲಿರುವ ಪರಲೋಕದ ಆಶೀರ್ವಾದಗಳೊಂದಿಗೂ ಕೆಳಗಿರುವ ಅಗಾಧದ ಆಶೀರ್ವಾದಗಳೊಂದಿಗೂ ಮೊಲೆಗಳ ಮತ್ತು ಗರ್ಭದ ಆಶೀರ್ವಾದಗಳೊಂದಿಗೂ ನಿನ್ನನ್ನು ಆಶೀರ್ವದಿಸುವ ಸರ್ವಶಕ್ತನಿಂದ ಬಲಿಷ್ಠನಾಗಿ ಮಾಡಲ್ಪಟ್ಟಿವೆ. (ಅಲ್ಲಿಂದ ಆತನು ಇಸ್ರಾಯೇಲನ ಕುರುಬನೂ ಬಂಡೆಯೂ ಆಗಿದ್ದಾನೆ.)
  ಆದಿಕಾಂಡ Genesis 49:25
 • ಆದರೆ ಇಸ್ರಾಯೇಲನ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿ ಹರಡಿಕೊಂಡು ಬಲಗೊಂಡರು. ಆ ದೇಶವು ಅವರಿಂದ ತುಂಬಿತು.
  ವಿಮೋಚನಕಾಂಡ 1:7
 • ಆತನು ನಿನ್ನನ್ನು ಪ್ರೀತಿಮಾಡಿ ಆಶೀರ್ವದಿಸಿ ಹೆಚ್ಚಿಸುವನು; ನಿನಗೆ ಕೊಡುತ್ತೇನೆಂದು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶದಲ್ಲಿ ನಿನ್ನ ಗರ್ಭದ ಫಲ ವನ್ನೂ ಭೂಮಿಯ ಹುಟ್ಟುವಳಿಯನ್ನೂ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಪಶುಗಳನ್ನೂ ನಿನ್ನ ಕುರಿಮಂದೆಗಳನ್ನೂ ಆಶೀರ್ವದಿಸುವನು. ಎಲ್ಲಾ ಜನಗಳಿಗಿಂತಲೂ ನೀನು ಆಶೀರ್ವದಿಸಲ್ಪಟ್ಟವನಾ ಗಿರುವಿ; ನಿಮ್ಮೊಳಗೆ ಸ್ತ್ರೀಯರಲ್ಲಾಗಲಿ ಪುರುಷರ ಲ್ಲಾಗಲಿ ಪಶುಗಳಲ್ಲಾಗಲಿ ಬಂಜೆತನವು ಇರುವದಿಲ್ಲ.
  ಧರ್ಮೋಪದೇಶಕಾಂಡ 7:13, 14
 • ಗರ್ಭದಲ್ಲಿ ನನ್ನನ್ನು ಉಂಟುಮಾಡಿ ದಾತನು ಅವನನ್ನೂ ಉಂಟು ಮಾಡಿದ್ದಾನಲ್ಲಾ? ನಮ್ಮನ್ನು ಗರ್ಭದಲ್ಲಿ ರೂಪಿಸಿದಾತನು ಒಬ್ಬನೇ ಅಲ್ಲವೋ?
  ಯೋಬನು 31:15
 • ಅವನ ಸಂತತಿಯು ಭೂಮಿಯಲ್ಲಿ ಪರಾಕ್ರಮಶಾಲಿ ಯಾಗಿರುವದು. ಯಥಾರ್ಥರ ಸಂತತಿಯು ಆಶೀ ರ್ವಾದ ಹೊಂದುವದು.
  ಕೀರ್ತನೆಗಳು 112:2
 • ಬಂಜೆಯಾದವಳನ್ನು ಮಕ್ಕಳ ಸಂತೋಷ ವುಳ್ಳ ತಾಯಿಯಾಗಿ ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾನೆ ಕರ್ತನನ್ನು ಸ್ತುತಿಸಿರಿ.
  ಕೀರ್ತನೆಗಳು 113:9
 • ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ.
  ಕೀರ್ತನೆಗಳು 127:3
 • ನೀನು ನನ್ನ ಅಂತರಿಂದ್ರಿಯಗಳನ್ನು ರೂಪಿಸಿದ್ದೀ; ನನ್ನ ತಾಯಿಯ ಗರ್ಭದಲ್ಲಿ ನೀನು ನನ್ನನ್ನು ಮುಚ್ಚಿದ್ದೀ.
  ಕೀರ್ತನೆಗಳು 139:13
 • ನಿನ್ನ ಬಾಗಲುಗಳ ಅಗುಳಿ ಗಳನ್ನು ಬಲಮಾಡಿ ಆತನು ನಿನ್ನ ಮಕ್ಕಳನ್ನು ನಿನ್ನ ಮಧ್ಯದಲ್ಲಿ ಆಶೀರ್ವದಿಸುತ್ತಾನೆ.
  ಕೀರ್ತನೆಗಳು 147:13
 • ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.
  ಯೆಶಾಯ 40:11
 • ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು. ನೀರಿನ ಕಾಲುವೆಗಳ ಬಳಿಯಲ್ಲಿ ಹಸಿರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿ ಯಾಗುವರು.
  ಯೆಶಾಯ 44:3, 4
 • ನಾನು ನಿನ್ನನ್ನು ಹೊಟ್ಟೆಯಲ್ಲಿ ನಿರ್ಮಿಸುವದಕ್ಕಿಂತ ಮುಂಚೆ ನಿನ್ನನ್ನು ತಿಳಿದಿದ್ದೆನು. ನೀನು ಗರ್ಭದಿಂದ ಹೊರಗೆ ಬರುವದಕ್ಕಿಂತ ಮುಂಚೆ ನಿನ್ನನ್ನು ಪರಿಶುದ್ಧ ಮಾಡಿದೆನು; ನಿನ್ನನ್ನು ಜನಾಂಗಗಳಿಗೆ ಪ್ರವಾದಿಯನ್ನಾಗಿ ನೇಮಿಸಿದೆನು ಅಂದನು.
  ಯೆರೆಮಿಯ 1:5
 • ಕರ್ತನಿಂದ ತನಗೆ ಹೇಳಲ್ಪಟ್ಟವುಗಳು ನೆರವೇರುವವೆಂದು ನಂಬಿದವಳು ಧನ್ಯಳು ಎಂದು ಹೇಳಿದಳು.
  ಲೂಕನು 1:45
 • ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು.
  ಇಬ್ರಿಯರಿಗೆ 11:11
 • ಆತನು ನನ್ನನ್ನು ವಿಶಾಲಸ್ಥಳಕ್ಕೆ ತಂದು ನನ್ನನ್ನು ತಪ್ಪಿಸಿಬಿಟ್ಟನು. ಯಾಕಂದರೆ ಆತನು ನನ್ನಲ್ಲಿ ಸಂತೋಷಪಟ್ಟನು.
  ಕೀರ್ತನೆಗಳು 18:19
 • ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸು; ಬೇಗ ನನ್ನನ್ನು ರಕ್ಷಿಸು. ನನ್ನನ್ನು ರಕ್ಷಿಸುವದಕ್ಕೆ ನನಗೆ ಬಲವಾದ ಬಂಡೆಯೂ ರಕ್ಷಣಾ ಮನೆಯೂ ಆಗಿರು.
  ಕೀರ್ತನೆಗಳು 31:2
 • ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ.
  ಕೀರ್ತನೆಗಳು 34:7
 • ಓ ಕರ್ತನೇ, ನನ್ನನ್ನು ಬಿಡಿಸು ವದಕ್ಕೆ ಇಷ್ಟವುಳ್ಳವನಾಗಿ, ಓ ಕರ್ತನೆ, ನನ್ನ ಸಹಾ ಯಕ್ಕೆ ತ್ವರೆಪಡು.
  ಕೀರ್ತನೆಗಳು 40:13
 • ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ಓ ನನ್ನ ದೇವರೇ, ತಡ ಮಾಡಬೇಡ.
  ಕೀರ್ತನೆಗಳು 40:17
 • ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
  ಕೀರ್ತನೆಗಳು 50:15
 • ನನ್ನ ಹೃದಯವು ಕುಂದಿಹೋಗಿರಲಾಗಿ, ಭೂಮಿಯ ಕಡೇ ಭಾಗದಿಂದ ನಿನ್ನನ್ನು ಕೂಗುವೆನು; ನನಗಿಂತ ಎತ್ತರ ವಾದ ಬಂಡೆಗೆ ನನ್ನನ್ನು ನಡಿಸು.
  ಕೀರ್ತನೆಗಳು 61:2
 • ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು.
  ಕೀರ್ತನೆಗಳು 91:14
 • ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ; ನೀತಿವಂತರ ವಂಶವು ತಪ್ಪಿಸಿಕೊಳ್ಳುವದು.
  ಙ್ಞಾನೋಕ್ತಿಗಳು 11:21
 • ಆತನು ದಣಿದವನಿಗೆ ಶಕ್ತಿಯನ್ನೂ ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ. ಯೌವನಸ್ಥರೋ ದಣಿದು ಬಳಲುವರು ತರುಣರು ಸಂಪೂರ್ಣವಾಗಿ ಬೀಳುವರು. ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು.
  ಯೆಶಾಯ 40:29-31
 • ಅವರು ವ್ಯರ್ಥವಾಗಿ ದುಡಿಯರು ಕಷ್ಟವನ್ನು ಎದುರುಗೊಳ್ಳುವದಿಲ್ಲ; ಯಾಕಂದರೆ ಅವರು ಕರ್ತನು ಆಶೀರ್ವದಿಸಿದವರ ಸಂತಾನವಾಗಿದ್ದಾರೆ. ಅವರ ಸಂಗಡ ಅವರ ಸಂತತಿಯು ಸಹ ಆಶೀರ್ವದಿಸ ಲ್ಪಡುವದು.
  ಯೆಶಾಯ 65:23
 • ಅವಳಿಗೆ ಪ್ರಸವವೇದನೆ ಆಗುವದಕ್ಕಿಂತ ಮುಂಚೆ ಹೆತ್ತಳು, ಅವಳಿಗೆ ನೋವು ಬರುವದಕ್ಕಿಂತ ಮುಂಚೆ ಗಂಡು ಮಗುವನ್ನು ಹೆತ್ತಳು. ಇಂಥಾದ್ದನ್ನು ಯಾರು ಕೇಳಿದ್ದಾರೆ? ಇಂಥವುಗಳನ್ನು ಯಾರು ನೋಡಿದ್ದಾರೆ? ಭೂಮಿ ಒಂದೇ ದಿವಸದಲ್ಲಿ ಹೆರುವಂತೆ ಮಾಡಿತೇ? ಅಥವಾ ಜನಾಂಗವು ಕ್ಷಣ ಮಾತ್ರದಲ್ಲಿ ಹುಟ್ಟೀತೇ? ಚೀಯೋನು ಪ್ರಸವವೇದನೆ ಪಟ್ಟಾಗಲೇ ತನ್ನ ಮಕ್ಕಳನ್ನು ಹೆತ್ತಳು. ನಾನು ಪ್ರಸವಕ್ಕೆ ತಂದ ಮೇಲೆ ಹೆರದಂತೆ ಮಾಡೆನೋ ಎಂದು ಕರ್ತನು ಹೇಳುತ್ತಾನೆ; ಇಲ್ಲವೆ ಹೆರುವಂತೆ ಮಾಡುವವನಾದ ನಾನು ಗರ್ಭವನ್ನು ಮುಚ್ಚುವೆನೇ ಎಂದು ನಿನ್ನ ದೇವರು ಹೇಳುತ್ತಾನೆ.
  ಯೆಶಾಯ 66:7, 9
 • ಒಬ್ಬ ಸ್ತ್ರೀಗೆ ತನ್ನ ಪ್ರಸವವೇದನೆಯ ಗಳಿಗೆ ಬಂದಾಗ ದುಃಖವಿರುವದು; ಆಕೆಯು ಮಗುವನ್ನು ಹೆತ್ತಕೂಡಲೆ ಈ ಲೋಕದೊಳಗೆ ಒಬ್ಬ ಮನುಷ್ಯನು ಹುಟ್ಟಿದನೆಂದು ಸಂತೋಷದಿಂದ ಆ ನೋವನ್ನು ಆಕೆಯು ನೆನಪಿಗೆ ತರುವದೇ ಇಲ್ಲ.
  ಯೋಹಾನನು 16:21
 • ಮನುಷ್ಯನಿಗೆ ಸಾಮಾನ್ಯ ವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ; ಆದರೆ ದೇವರು ನಂಬಿಗಸ್ತನು; ನೀವು ಸಹಿಸುವದಕ್ಕಿಂತ ಹೆಚ್ಚಿನ ಶೋಧನೆಯನ್ನು ಆತನು ನಿಮಗೆ ಬರಮಾಡುವದಿಲ್ಲ; ಆದರೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧ
  1 ಕೊರಿಂಥದವರಿಗೆ 10:13
 • ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು.
  2 ಕೊರಿಂಥದವರಿಗೆ 12:9
 • ಒಳ್ಳೆದನ್ನು ಮಾಡುವದರಲ್ಲಿ ಬೇಸರ ಗೊಳ್ಳದೆ ಇರೋಣ. ಯಾಕಂದರೆ ನಾವು ಮನಗುಂದ ದಿದ್ದರೆ ತಕ್ಕ ಸಮಯದಲ್ಲಿ ಕೊಯ್ಯುವೆವು.
  ಗಲಾತ್ಯದವರಿಗೆ 6:9
 • ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು.
  ಫಿಲಿಪ್ಪಿಯವರಿಗೆ 4:13
 • ಆದರೂ ಅವರು ಸ್ವಸ್ಥ ಬುದ್ಧಿಯಿಂದೊಡಗೂಡಿದ ನಂಬಿಕೆಯ ಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಆಕೆಯು ಮಗುವನ್ನು ಹೆರುವದರಲ್ಲಿ ರಕ್ಷಣೆ ಹೊಂದುವಳು.
  1 ತಿಮೊಥೆಯನಿಗೆ 2:15