0:00
0:00

ಅಧ್ಯಾಯ 150

ನೀವು ಕರ್ತನನ್ನು ಸ್ತುತಿಸಿರಿ. ದೇವರನ್ನು ಆತನ ಪರಿಶುದ್ಧ ಆಲಯದಲ್ಲಿ ಸ್ತುತಿಸಿರಿ; ಆತನ ಬಲದ ಆಂತರಿಕ್ಷದಲ್ಲಿ ಆತನನ್ನು ಸ್ತುತಿಸಿರಿ.
2 ಆತನ ಪರಾಕ್ರಮಗಳಿಗೋಸ್ಕರ ಆತನನ್ನು ಸ್ತುತಿಸಿರಿ; ಆತನ ಮಹಾ ಪ್ರಭಾವದ ಪ್ರಕಾರ ಆತನನ್ನು ಸ್ತುತಿಸಿರಿ.
3 ತುತೂರಿಯ ಶಬ್ದ ದಿಂದ ಆತನನ್ನು ಸ್ತುತಿಸಿರಿ. ವೀಣೆಯಿಂದಲೂ ಕಿನ್ನರಿಯಿಂದಲೂ ಆತನನ್ನು ಸ್ತುತಿಸಿರಿ.
4 ದಮ್ಮಡಿ ಯಿಂದಲೂ ಕುಣಿಯುತ್ತಾ ಆತನನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತ ನನ್ನು ಸ್ತುತಿಸಿರಿ.
5 ಜಲ್ಲರಿಯ ದೊಡ್ಡ ಶಬ್ದದಿಂದ ಆತನನ್ನು ಸ್ತುತಿಸಿರಿ; ಉತ್ಸಾಹದ ತಾಳಗಳಿಂದ ಆತನನ್ನು ಸ್ತುತಿಸಿರಿ.
6 ಶ್ವಾಸವಿರುವದೆಲ್ಲಾ ಕರ್ತನನ್ನು ಸ್ತುತಿಸಲಿ. ಕರ್ತನನ್ನು ಸ್ತುತಿಸಿರಿ.